ನೋಕಿಯಾ ಒವಿಐನ ಟಾಪ್ ಟ್ವೆನ್ಟಿ ಗೀತೆಗಳಲ್ಲಿ ?ಪಾರಿಜಾತದ ಹಾಡುಗಳು
Posted date: 09 Fri, Dec 2011 ? 09:06:45 AM

ಪಿ.ಟು ಪ್ರೊಡಕ್ಷನ್ಸ್ ಲಾಂಛನದಲ್ಲಿ ಪರಮೇಶ್ ಹಾಗೂ ಪ್ರೇಂಕುಮಾರ್ ಅವರು ನಿರ್ಮಿಸಿರುವ ‘ಪಾರಿಜಾತ ಚಿತ್ರಕ್ಕಾಗಿ ಸೋನು ನಿಗಂ ಹಾಡಿರುವ ‘ಓ ಪರಿಜಾತ ಹಾಗೂ ಶ್ರೇಯಾ ಘೋಶಾಲ್ ಹಾಡಿರುವ ‘ನೀ ಮೋಹಿಸು ಗೀತೆಗಳು ನೋಕಿಯಾ ಒವಿಐನ ಟಾಪ್ ಟ್ವೆನ್ಟಿ ಗೀತೆಗಳಲ್ಲಿ ಆಯ್ಕೆಯಾಗಿದೆ.
    ದಕ್ಷಿಣ ಭಾರತದ ಟಾಪ್ ಟ್ವೆನ್ಟಿ ಗೀತೆಗಳಲ್ಲಿ ಮನೋಮೂರ್ತಿ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಆಯ್ಕೆಯಾಗಿರುವುದಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕರು ಸೇರಿದಂತೆ ಚಿತ್ರತಂಡದ ಸದಸ್ಯರು ಸಂತಸ ಪಟ್ಟಿದ್ದಾರೆ.
    ಚಿತ್ರದ ಹಾಡುಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.  ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.       ಪ್ರಭುಶ್ರೀನಿವಾಸ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ದಿಗಂತ್ ಅಭಿನಯಿಸಿದ್ದಾರೆ. ಅಂದ್ರಿತಾ ರೇ, ಮುಖ್ಯಮಂತ್ರಿಚಂದ್ರು, ಶರಣ್, ಕಾದಲ್ ದಂಡಪಾಣಿ, ಪದ್ಮಜಾರಾವ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
     ಶ್ರೀನಿವಾಸ್‌ದೇವನಾಂರ ಛಾಯಾಗ್ರಹಣ, ಸಾಯಿಸುರೇಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನವಿರುವ ‘ಪಾರಿಜಾತಕ್ಕೆ ಪ್ರಭುಶ್ರೀನಿವಾಸ್ ಹಾಗೂ ಬಾಬುಕುಮಾರ್ ನೃತ್ಯ ನಿರ್ದೆಶನ ಮಾಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed